2 ಸಮುವೇಲನು 6 : 1 (KNV)
ದಾವೀದನು ಇಸ್ರಾಯೇಲಿನಲ್ಲಿ ಆಯಲ್ಪಟ್ಟ ಮೂವತ್ತು ಸಾವಿರ ಜನರನ್ನು ಕೂಡಿಸಿ ಕೊಂಡು ಎದ್ದು ತನ್ನ ಸಂಗಡ ಇದ್ದ ಎಲ್ಲಾ ಜನರನ್ನು ಕರಕೊಂಡು
2 ಸಮುವೇಲನು 6 : 2 (KNV)
ಕೆರೂಬಿಗಳ ಮಧ್ಯದಲ್ಲಿ ವಾಸವಾಗಿ ರುವ ಸೈನ್ಯಗಳ ಕರ್ತನೆಂಬ ಹೆಸರುಳ್ಳ ದೇವರ ಮಂಜೂ ಷವನ್ನು ಯೆಹೂದದ ಬಾಳಾದಿಂದ ತರುವದಕ್ಕೆ ಹೊರಟನು.
2 ಸಮುವೇಲನು 6 : 3 (KNV)
ಆಗ ಅವರು ಗಿಬ್ಯದಲ್ಲಿರುವ ಅಬೀನಾ ದಾಬನ ಮನೆಯೊಳಗಿಂದ ದೇವರ ಮಂಜೂಷವನ್ನು ತೆಗೆದುಕೊಂಡು ಹೊಸ ಬಂಡಿಯ ಮೇಲೆ ಏರಿಸಿದರು.
2 ಸಮುವೇಲನು 6 : 4 (KNV)
ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಆ ಹೊಸ ಬಂಡಿಯನ್ನು ನಡಿಸಿದರು. ಗಿಬ್ಯ ದಲ್ಲಿದ್ದ ಅಬೀನಾದಾಬನ ಮನೆಯೊಳಗಿಂದ ಅದನ್ನು ಹೊರಗೆ ತಂದು ಅವರು ಅದರ ಸಂಗಡ ಹೋಗು ತ್ತಿರುವಾಗ ಅಹಿಯೋವನು ಮಂಜೂಷದ ಮುಂದೆ ನಡೆದನು.
2 ಸಮುವೇಲನು 6 : 5 (KNV)
ದಾವೀದನೂ ಇಸ್ರಾಯೇಲ್ ಮನೆ ಯವರೆಲ್ಲರೂ ತುರಾಯಿ ಮರದಿಂದ ಮಾಡಲ್ಪಟ್ಟ ಸಕಲ ವಾದ್ಯಗಳಾದ ಕಿನ್ನರಿಗಳನ್ನೂ ವೀಣೆಗಳನ್ನೂ ದಮ್ಮಡಿಗಳನ್ನೂ ಸ್ವರಮಂಡಲಗಳನ್ನೂ ತಾಳಗಳನ್ನೂ ಕರ್ತನ ಮುಂದೆ ಬಾರಿಸಿಕೊಂಡು ಹೋದರು.
2 ಸಮುವೇಲನು 6 : 6 (KNV)
ಅವರು ನಾಕೋನನ ಕಣದ ಬಳಿಗೆ ಬಂದಾಗ ಉಜ್ಜನು ದೇವರ ಮಂಜೂಷವನ್ನು ಹಿಡಿಯುವದಕ್ಕೆ ತನ್ನ ಕೈಚಾಚಿ ಅದನ್ನು ಹಿಡಿದನು. ಯಾಕಂದರೆ ಎತ್ತುಗಳು ಎಡವಿದವು.
2 ಸಮುವೇಲನು 6 : 7 (KNV)
ಆಗ ಕರ್ತನ ಕೋಪವು ಉಜ್ಜನ ಮೇಲೆ ಉರಿಯಿತು; ದೇವರು ಅವನ ಅಪ ರಾಧಕ್ಕೋಸ್ಕರ ಅವನನ್ನು ಹೊಡೆದನು; ಅಲ್ಲಿ ಅವನು ದೇವರ ಮಂಜೂಷದ ಬಳಿಯಲ್ಲಿ ಸತ್ತನು.
2 ಸಮುವೇಲನು 6 : 8 (KNV)
ಕರ್ತನು ಉಜ್ಜನನ್ನು ಹರಿದುಬಿಟ್ಟಿದ್ದರಿಂದ ದಾವೀದನು ವ್ಯಥೆ ಗೊಂಡು ಆ ಸ್ಥಳಕ್ಕೆ ಇಂದಿನ ವರೆಗೂ ಪೆರೆಚುಜ್ಜಾ ಎಂದು ಹೆಸರಿಟ್ಟನು.
2 ಸಮುವೇಲನು 6 : 9 (KNV)
ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ಕರ್ತನ ಮಂಜೂಷವು ನನ್ನ ಬಳಿಗೆ ಬರುವದು ಹೇಗೆ ಅಂದನು.
2 ಸಮುವೇಲನು 6 : 10 (KNV)
ದಾವೀದನು ಕರ್ತನ ಮಂಜೂಷವನ್ನು ತಾನು ದಾವೀದನ ಪಟ್ಟಣಕ್ಕೆ ತರಲು ಮನಸ್ಸಿಲ್ಲದೆ ಗತ್ ಊರಿನ ಒಬೇದೆದೋಮನ ಮನೆಗೆ ಹೊತ್ತುಕೊಂಡು ಹೋದನು.
2 ಸಮುವೇಲನು 6 : 11 (KNV)
ಕರ್ತನ ಮಂಜೂ ಷವು ಗತ್ ಊರಿನ ಒಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇದ್ದದ್ದರಿಂದ ಕರ್ತನು ಒಬೇದೆ ದೋಮನನ್ನೂ ಅವನ ಮನೆಯವರೆಲ್ಲರನ್ನೂ ಆಶೀರ್ವದಿಸಿದನು.
2 ಸಮುವೇಲನು 6 : 12 (KNV)
ದೇವರ ಮಂಜೂಷದ ನಿಮಿತ್ತ ಕರ್ತನು ಒಬೇ ದೆದೋಮನ ಮನೆಯನ್ನೂ ಅವನಿಗೆ ಉಂಟಾದ ದ್ದೆಲ್ಲವನ್ನೂ ಆಶೀರ್ವದಿಸಿದ್ದಾನೆಂದು ಅರಸನಾದ ದಾವೀದನಿಗೆ ತಿಳಿಸಲ್ಪಟ್ಟಿತು. ಆಗ ದಾವೀದನು ಹೊರಟು ಹೋಗಿ ದೇವರ ಮಂಜೂಷವನ್ನು ಒಬೇ ದೆದೋಮನ ಮನೆಯಿಂದ ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು.
2 ಸಮುವೇಲನು 6 : 13 (KNV)
ಕರ್ತನ ಮಂಜೂಷ ವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ ಅವನು ಎತ್ತುಗಳನ್ನೂ ಕೊಬ್ಬಿದ ಪಶು ಗಳನ್ನೂ ಬಲಿಯಾಗಿ ಕೊಟ್ಟನು.
2 ಸಮುವೇಲನು 6 : 14 (KNV)
ಇದಲ್ಲದೆ ದಾವೀ ದನು ನಾರಿನ ಎಫೋದನ್ನು ಧರಿಸಿಕೊಂಡು ತನ್ನ ಪೂರ್ಣ ಬಲದಿಂದ ಕರ್ತನ ಮುಂದೆ ನಾಟ್ಯವಾ ಡಿದನು.
2 ಸಮುವೇಲನು 6 : 15 (KNV)
ಈ ಪ್ರಕಾರ ದಾವೀದನೂ ಇಸ್ರಾಯೇಲ್ ಮನೆಯವರೆಲ್ಲರೂ ಕರ್ತನ ಮಂಜೂಷವನ್ನು ಆರ್ಭಟ ದಿಂದಲೂ ತುತೂರಿಯ ಶಬ್ದದಿಂದಲೂ ಬರಮಾಡಿ ದರು.
2 ಸಮುವೇಲನು 6 : 16 (KNV)
ಆದರೆ ಕರ್ತನ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ ಸೌಲನ ಮಗಳಾದ ವಿಾಕಲಳು ಕಿಟಿಕಿಯಿಂದ ನೋಡಿ ಅರಸನಾದ ದಾವೀ ದನು ಕರ್ತನ ಮುಂದೆ ಜಿಗಿಯುತ್ತಾ ನಾಟ್ಯವಾಡು ವದನ್ನು ಕಂಡು ತನ್ನ ಹೃದಯದಲ್ಲಿ ಅವನನ್ನು ತಿರಸ್ಕ ರಿಸಿದಳು.
2 ಸಮುವೇಲನು 6 : 17 (KNV)
ಅವರು ಕರ್ತನ ಮಂಜೂಷವನ್ನು ಒಳಗೆ ತಂದು ದಾವೀದನು ಹಾಕಿಸಿದ ಗುಡಾರದೊಳಗೆ ಅದರ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ ದಾವೀದನು ಕರ್ತನ ಸನ್ನಿಧಿಯಲ್ಲಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು.
2 ಸಮುವೇಲನು 6 : 18 (KNV)
ದಾವೀದನು ದಹನಬಲಿಗಳನ್ನೂ ಸಮಾಧಾನದಬಲಿಗಳನ್ನೂ ಅರ್ಪಿಸಿ ತೀರಿಸಿದ ತರುವಾಯ ಸೈನ್ಯಗಳ ಕರ್ತನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ ಜನರಿಗೆಲ್ಲಾ ಅಂದರೆ ಇಸ್ರಾಯೇಲಿನ ಸಮೂಹಕ್ಕೆಲ್ಲಾ
2 ಸಮುವೇಲನು 6 : 19 (KNV)
ಸ್ತ್ರೀ ಪುರುಷರಲ್ಲಿ ಒಬ್ಬೊಬ್ಬರಿಗೆ ಒಂದು ರೊಟ್ಟಿ ತುಂಡನ್ನೂ ಒಂದು ದೊಡ್ಡ ತುಂಡು ಮಾಂಸವನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ಕೊಟ್ಟನು. ತರುವಾಯ ಜನರೆ ಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
2 ಸಮುವೇಲನು 6 : 20 (KNV)
ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವದಕ್ಕೆ ಹೋದಾಗ ಸೌಲನ ಮಗಳಾದ ವಿಾಕಲಳು ದಾವೀದನಿಗೆ ಎದುರಾಗಿ ಬಂದು--ನಿಷ್ಪ್ರ ಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ ಹಾಗೆಯೇ ಈಹೊತ್ತು ತನ್ನ ಸೇವಕರ ದಾಸಿಗಳ ಕಣ್ಣುಮುಂದೆ ತನ್ನ ವಸ್ತ್ರ ಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಪಟ್ಟನು ಅಂದಳು.
2 ಸಮುವೇಲನು 6 : 21 (KNV)
ಆದರೆ ದಾವೀದನು ವಿಾಕಳಿಗೆ--ನಿನ್ನ ತಂದೆಗಿಂತಲೂ ಅವನ ಮನೆಯವರೆಲ್ಲರಿಗಿಂತಲೂ ನನ್ನನ್ನು ಕರ್ತನು ತನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿ ನೇಮಿಸುವೆನು ಎಂದು ಆದುಕೊಂಡ ಕರ್ತನ ಸಮ್ಮು ಖದ ಮುಂದೆಯೇ ಆಯಿತು.
2 ಸಮುವೇಲನು 6 : 22 (KNV)
ನಾನು ಕರ್ತನ ಮುಂದೆ ಆಡುವೆನು. ಇನ್ನೂ ಇದಕ್ಕಿಂತ ಅಲ್ಪನಾಗಿ ಇರುವೆನು; ನಿನ್ನ ದೃಷ್ಟಿಯಲ್ಲಿ ನೀಚನಾಗಿರುವೆನು.ಆದರೆ ನೀನು ಹೇಳಿದ ದಾಸಿಗಳಿಂದ ನಿಶ್ಚಯವಾಗಿ ಘನವನ್ನು ಹೊಂದುವೆನು ಅಂದನು.
2 ಸಮುವೇಲನು 6 : 23 (KNV)
ಆದದರಿಂದ ಸೌಲನ ಮಗಳಾದ ವಿಾಕಲಳು ತನ್ನ ಮರಣದ ದಿವಸದ ವರೆಗೂ ಮಕ್ಕಳಿಲ್ಲದವಳಾಗಿದ್ದಳು.

1 2 3 4 5 6 7 8 9 10 11 12 13 14 15 16 17 18 19 20 21 22 23